ಇಂಗ್ಲಿಷ್ ಮತ್ತು ನಮ್ಮ ಭಾಷೆ
ಇಂಗ್ಲಿಷ್ ಭಾಷೆಗೆ ಅನ್ವಯಿಸುವ ಹಲವು ಸಿದ್ಧಾಂತಗಳನ್ನು ಹಾಗೆ ಹಾಗೆಯೇ ನಮ್ಮ ಕನ್ನಡ ಭಾಷೆಗೂ ಅನ್ವಯಿಸುವುದನ್ನು ಕೆಲವೊಮ್ಮೆ ನಾವು ಕಾಣುತ್ತೇವೆ.
ಕನ್ನಡವನ್ನು ಹೇಗೆ ಕಲಿಸಬೇಕು ಎಂಬ ಬಗೆಗಿನ ಚರ್ಚೆ ಕೂಡ ಈ ನಿಟ್ಟಿನಲ್ಲಿ ಗಮನಾರ್ಹ.
ಯಾವುದೇ ಭಾಷೆಯನ್ನು ಕಲಿಯುವ ಸರಿಯಾದ ಹಂತಗಳು ನಮಗೆಲ್ಲ ಗೊತ್ತಿರುವಂಥದ್ದೆ. ಆಲಿಸು, ಮಾತಾಡು, ಓದು, ಬರೆ- ಹೀಗೆ ಹಂತಗಳು.
ಮಾತ್ರ್ ಭಾಷೆಯಲ್ಲದ ಬೇರೊಂದು ಭಾಷೆಯನ್ನು ಮಾತಾಡಲು ಕಲಿಸುವಾಗ ಶಬ್ದ ಅಥವಾ ವಾಕ್ಯಗಳ ಮುಲಕ ಕಲಿಸುವುದು ಸರಿಯಾಗುತ್ತದೆ.
ಇಂಗ್ಲಿಷನ್ನು ಕಲಿಸುವಾಗ ಇದೇ ತತ್ವ ಬಹುಮಟ್ಟಿಗೆ ಬರಹಕ್ಕೂ ಅನ್ವಯವಾಗುತ್ತದೆ. ಆದರೆ ಮಕ್ಕಳಿಗೆ ಕನ್ನಡ ಬರೆಯಲು ಕಲಿಸುವಾಗ ಈ ತತ್ವ ಹೊಂದುತ್ತದೆಯೇ?
ಪ್ರಸಿದ್ಧ ಬರಹಗಾರರಾದ ಕೆ.ಟಿ. ಗಟ್ಟಿಯವರ ಭಾಷಾಬೋಧನೆಯ ಪುಸ್ತಕಗಳನ್ನು ಗಮನಿಸಿದಾಗ ಕೆಲವು ಸಂದೇಹಗಳು ಏಳುತ್ತವೆ.
ಗಟ್ಟಿಯವರು ಕನ್ನಡ , ಇಂಗ್ಲಿಷ್ ಮತ್ತು ತುಳು ಕಲಿಸುವ ಪುಸ್ತಕಗಳನ್ನು ಬರೆದಿದ್ದಾರೆ. ಬರೆಯುವುದನ್ನು ಕಲಿಸಲು ಕನ್ನಡ -ಇಂಗ್ಲಿಷ್ ಎರಡಕ್ಕೂ ಒಂದೇ ಮಾದರಿಯನ್ನು ಅವರ ಪುಸ್ತಕಗಳು ಅನುಸರಿಸುತ್ತವೆ."ಅಕ್ಷರಗಳ ಮುಲಕ ಕಲಿತವರು (ಅಂದರೆ ಅ ಆ ಇ ಈ ಇತ್ಯಾದಿಯೊಂದಿಗೆ ಆರಂಭಿಸಿ) ಅಕ್ಷರಗಳನ್ನು ಕೂಡಿಸಿ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ; ವಾಕ್ಯಗಳ ಮುಲಕ ಕಲಿಯುವುದು ಹೆಚ್ಚು ಉಪಯುಕ್ತ ಮತ್ತು ಅದೇ ವೇಗದ ಕಲಿಕೆಗೆ, ಓದುವಿಕೆಗೆ, ವೇಗದ ಬರಹಕ್ಕೆ ಅನುಕೂಲಕರ " ಎಂಬುದು ಗಟ್ಟಿಯವರ ತಾತ್ವಿಕತೆ.ಕನ್ನಡದಲ್ಲಿ ಹೀಗೆ ಕಲಿತವರು ಆರಂಭದಲ್ಲಿ ಅಕ್ಷರ ಕೂಡಿಸಿ ಓದುವುದು ನಿಜ. ಆದರೆ ಕೆಲವೇ ಸಮಯದಲ್ಲಿ ಶಬ್ದಗಳನ್ನು ,ವಾಕ್ಯಗಳನ್ನು ಇಡಿಯಾಗಿ ಗ್ರಹಿಸಿ ಓದತೊಡಗುತ್ತಾರೆ.ಅಕ್ಷರ ಕೂಡಿಸಿ ಓದುವುದನ್ನೇ ಮುಂದುವರಿಸುತ್ತಾರೆ ಎಂದುಕೊಳ್ಳುವುದು ಸರಿಯಲ್ಲ.ಅಕ್ಷರಗಳು ಮಿತ ಹಾಗೂ ಶಬ್ದಗಳು ಅಪರಿಮಿತವಾದ್ದರಿಂದ ಕನ್ನಡದ ಮಟ್ಟಿಗೆ ಅಕ್ಷರಗಳನ್ನು ಹಾಗೂ ಕಾಗುಣಿತಗಳನ್ನು ಕಲಿಯುದೆಂದರೆ ಅಸಂಖ್ಯಾತ ಪದಗಳನ್ನು ಮತ್ತು ವಾಕ್ಯಗಳನ್ನು ಓದುವ ಮತ್ತು ಬರೆವ ಸೂತ್ರಗಳನ್ನು ಕರಗತ ಮಾಡಿಕೊಂಡಂತೆಯೇ ಆಗುತ್ತದೆ.
ಬಳಕೆಯ ಸನ್ನಿವೇಶವನ್ನು ಗಮನಿಸಿದರೆ , ಯಾವುದೇ ಭಾಷೆಯ ಮುಖ್ಯವಾದ ಅಥವಾ ಅರ್ಥಪೂರ್ಣ ಘಟಕವೆಂದರೆ ವಾಕ್ಯವೆಂಬುದು ಸರಿ.ಆದರೆ, ಅಕ್ಷರಗಳ ವಿಷಯಕ್ಕೆ ಬಂದರೆ ಅ ಆ ಇ ಈ ಕಲಿಯುವುದು ಮತ್ತು ಎ ಬಿ ಸಿ ಡಿ ಕಲಿಯುವುದು ಒಂದೇ ಅಲ್ಲ.ಇಂಗ್ಲಿಷ್ ಧ್ವನ್ಯಾತ್ಮಕ ಭಾಷೆ ಅಲ್ಲ. ಕನ್ನಡ ಧ್ವನ್ಯಾತ್ಮಕ ಭಾಷೆ. (ಮಂಚ ಮಂಗ ಮೊದಲಾದ ಕಡೆ ಮಾತ್ರ ಉಚ್ಚಾರಕ್ಕಿಂತ ಬೇರೆಯಾದ ಬರಹ ಇದೆ ಅಷ್ಟೆ.) ಕನ್ನಡದಲ್ಲಿ ಇನ್ನೊಬ್ಬ ವ್ಯಕ್ತಿ ಹೇಳಿದ ಹೊಸ ಪದವನ್ನು ಅಕ್ಷರ ಗೊತ್ತಿದ್ದವನು ಬರೆಯಬಲ್ಲ.ಇದು ಸಂಸ್ಕ್ರುತವನ್ನು ಅನುಸರಿಸಿದ್ದರಿಂದ ಕನ್ನಡಕ್ಕಾದ ದೊಡ್ಡ ಲಾಭ.( ಸಂಸ್ಕ್ರುತವನ್ನು ದ್ವೇಷಿಸಿದ ತಮಿಳಿನಲ್ಲಿ ಅದು ಸಾಧ್ಯವಿಲ್ಲ.)
ಇಂಗ್ಲಿಷಿನಲ್ಲಿ ಸ್ಪೆಲ್ಲಿಂಗ್ ಗೊತ್ತಿಲ್ಲದೆ ಹೊಸ ಪದವನ್ನು ಕೇವಲ ಕೇಳಿದ ಆಧಾರದಲ್ಲಷ್ಟೇ ಬರೆಯಲು ಅಸಾಧ್ಯ.
ವರ್ಣಮಾಲೆಯ ಕಲಿಕಾ ವಿಧಾನ ಇಂಗ್ಲಿಷಿನಷ್ಟರ ಮಟ್ಟಿಗೆ ಕನ್ನಡದಲ್ಲಿ ತಿರಸ್ಕಾರಯೋಗ್ಯವಾದುದಲ್ಲ.
ನೀವೇನಂತೀರಿ ?
ಕೊನೆಬೆಡಿ :
ಬೀಜ ಮೊಳಕೆಯೊಡೆವಾಗ ಸದ್ದಿಲ್ಲವೆಂದು ಡಿ.ವಿ.ಜಿ.ಹೇಳಿದಂತೆ , ಹಣ್ಣೆಲೆ ಉದುರುವಾಗ ಸದ್ದಿಲ್ಲ ಸುದ್ದಿಯಿಲ್ಲ. ಮಾನವ ಮಡಿದಾಗ ಬೆಡಿಮದ್ದಿನ ಸದ್ದು,ಗೋಲಿಬಾರಿನ ಸುದ್ದಿ.
ಸೋಮವಾರ, ಜನವರಿ 4, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಎಲ್ಲರೂ ಇದೇ ನಿರ್ಧಾರಾದವರೇ ಆದರೂ ಬದಲವಣೆ ಅನ್ನೋದು ಆಗೇ ಇಲ್ಲ ಎಂಬ ವಿಷಾಧವಿದೆ, ಸಮರ್ಪಕವಾದ ಉದಾಹರಣೆ ಇರುವಾಗಲಾದರೂ ಕನ್ನಡವನ್ನ ಸುಂದರವಾಗಿ ಕಲಿಸಲು ಯೋಗ್ಯವಾದ ಭಾಷೆ ಅಂತ ಒಪ್ಪಬೇಕಲ್ಲ.. ವರ್ಣಮಾಲೆಯಿಲ್ಲದ ಸಾಹಿತ್ಯವಾಗಲಿ, ಮಾತಾಗಲಿ ಕನ್ನಡದಲ್ಲಿ ಸಾದ್ಯವಾಗಬಾರದು ಎನ್ನುವುದಷ್ಟೇ ನಿರ್ಧಾರ ಆಗಬೇಕು..
ಪ್ರತ್ಯುತ್ತರಅಳಿಸಿ